ವಿರೂಪಾಕ್ಷ 1 

 	ವಿಜಯನಗರ ಸಂಗಮವಂಶದ ದೊರೆ. ಒಂದನೆಯ ಬುಕ್ಕನ ಮಗ. ಇಮ್ಮಡಿ ಹರಿಹರ ಮತ್ತು ಇಮ್ಮಡಿ ಕೆಂಪಣ್ಣ ಈತನ ಸೋದರರು. ಯುವರಾಜಪದವಿಯಲ್ಲಿಯೇ ಮುಂದುವರಿದು ವಿರೂಪಾಕ್ಷ ರಾಜ್ಯವಾಳಲಿಲ್ಲ. ಈತ ಆರಗ ಪ್ರಾಂತ ಅಥವಾ ಮಲೆ ರಾಜ್ಯದ ಪ್ರಾಂತಾಧಿ ಕಾರಿಯಾಗಿದ್ದ. ಹಲವು ಇತಿಹಾಸಕಾರರು ಈತನನ್ನು ಗಣನೆಗೆ ತೆಗೆದು ಕೊಳ್ಳದೆ ಇಮ್ಮಡಿ ಹರಿಹರನ ಮಗ ವಿರೂಪಾಕ್ಷನೆಂದು ಪರಿಗಣಿಸಿದ್ದಾರೆ.  						
		(ಜಿ.ಬಿ.ಆರ್.)

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ